Kannada is the primary language below. English summaries follow each section.

1

ಅಮ್ಮನವರ ಸಾನ್ನಿಧ್ಯ ಕಾಲ

Amman's Presence Period

ಶ್ರೀ ಗೌರಮ್ಮ ದೇವಿಯವರು ವರ್ಷದಲ್ಲಿ ಭಾದ್ರಪದ ಮಾಸದ ಶುಕ್ಲ ಪಕ್ಷದ ತದಿಗೆಯಿಂದ ಆರಂಭವಾಗಿ ಕೇವಲ 1 ತಿಂಗಳ ಕಾಲ ಮಾತ್ರ ಈ ಕ್ಷೇತ್ರದಲ್ಲಿ ನೆಲೆಸಿರುತ್ತಾರೆ. ನಂತರ ದರ್ಶನ ಲಭ್ಯವಿರುವುದಿಲ್ಲ.

English: Goddess Gowramma resides at the kshetra for only one month each year, from Bhādrapada Shukla Paksha. No darshan is available after this period.

2

ದರ್ಶನ ಹಾಗೂ ಪೂಜಾ ಸಮಯ

Darshan & Puja Timings

ಬೆಳಿಗ್ಗೆ: 10:00 ರಿಂದ ಸಂಜೆ 6:00 ರವರೆಗೆ. ರಾತ್ರಿ: 8:30 ರಿಂದ 10:00 ರವರೆಗೆ. ಈ ಸಮಯವನ್ನು ಮೈಸೂರು ಸಂಸ್ಥಾನದ ರಾಜ ಪರಂಪರೆಯಿಂದ ನಿಗದಿಪಡಿಸಲಾಗಿದೆ. ನಿಗದಿತ ಸಮಯದ ಹೊರತು ದರ್ಶನಕ್ಕೆ ಅವಕಾಶವಿಲ್ಲ. ದಯವಿಟ್ಟು ವಿನಂತಿಸಬೇಡಿ.

English: Morning darshan 10:00 AM–6:00 PM; night darshan 8:30–10:00 PM (during presence month). Timings follow Mysore Samsthana tradition — fixed, with no exceptions.

3

ಅನ್ನದಾನ ಸೇವೆ

Annadana Seva

ಅಮ್ಮನವರು ನೆಲೆಸಿರುವ 1 ತಿಂಗಳ ಕಾಲ ಪ್ರತಿದಿನ ಅನ್ನದಾನ ನಡೆಯುತ್ತದೆ. ಭಕ್ತಾದಿಗಳು ಅಕ್ಕಿ, ತರಕಾರಿ, ದಿನಸಿ, ಸಿಹಿ ಪದಾರ್ಥಗಳನ್ನು ನೀಡಿ ಕಡ್ಡಾಯವಾಗಿ ರಶೀದಿ ಪಡೆಯಬಹುದು. ಅಮ್ಮನವರ ಸನ್ನಿಧಿಯಲ್ಲಿ ಅನ್ನದಾನ ಸೇವೆ ಮಾಡಿಸುವವರು ಸಮಿತಿಯಿಂದ ಮೊದಲೇ ನೋಂದಣಿ ಮಾಡಿಕೊಳ್ಳಬೇಕು.

English: Daily Annadana during Amman's one-month stay. Devotees may offer rice, vegetables, groceries, and sweets — mandatory receipt required. Annadana seva organisers must register in advance with the Samithi.

4

ಕಾಣಿಕೆ ಮತ್ತು ದೇಣಿಗೆ

Offerings & Donations

ಚಿನ್ನ, ಬೆಳ್ಳಿ ಆಭರಣಗಳು, ದೇವಾಲಯದ ಅಭಿವೃದ್ಧಿ ಹಾಗೂ ದಾಸೋಹಕ್ಕಾಗಿ ಹಣ ಅಥವಾ UPI ಮೂಲಕ ಕಾಣಿಕೆ ಸ್ವೀಕರಿಸಲಾಗುತ್ತದೆ. ಯಾವುದೇ ಕಾಣಿಕೆಗೂ ಕಡ್ಡಾಯವಾಗಿ ರಶೀದಿ ಪಡೆಯತಕ್ಕದ್ದು. ರಶೀದಿ ಇದ್ದರೆ ಮಾತ್ರ ನಿಮ್ಮ ಸೇವೆ ಅಮ್ಮನವರಿಗೆ ಸಲ್ಲುತ್ತದೆ. ಈ ಸನ್ನಿಧಿಯಲ್ಲಿ ಯಾರೂ ಹಣಕ್ಕೆ ಒತ್ತಾಯ ಮಾಡುವುದಿಲ್ಲ.

English: Gold, silver, ornaments, and cash/UPI donations accepted for temple development. Mandatory receipt for every offering — only then does your seva reach Amman. No one will pressure you for money here.

5

ವಂಚನೆಯ ಬಗ್ಗೆ ಎಚ್ಚರಿಕೆ

Fraud Warning

ಪಾಂಪ್ಲೆಟ್, ಬಿಲ್ ಬುಕ್, ವಿಡಿಯೋ, ಫೋಟೋ ತೋರಿಸಿ ಎಂತಹ ಪ್ರಮುಖ ವ್ಯಕ್ತಿಯೇ ಆದರೂ ಹಣ ಕೇಳಿದರೆ ದಯವಿಟ್ಟು ನೀಡಬೇಡಿ. ಕಾಣಿಕೆಯನ್ನು ಅಮ್ಮನವರು ಇರುವಾಗ, ಸನ್ನಿಧಿಗೆ ಆಗಮಿಸಿ, ಸಮಿತಿಯ ಸಮ್ಮುಖದಲ್ಲೇ ನೀಡಿದರೆ ಮಾತ್ರ ಅಮ್ಮನವರಿಗೆ ಸಲ್ಲುತ್ತದೆ.

English: Do not give money to anyone showing pamphlets, bill books, videos, or photos — even if they claim to be important. Donate only in the Samithi's presence when Amman is at the kshetra.

6

ಛಾಯಾಚಿತ್ರ ಮತ್ತು ಮಾಧ್ಯಮ ನಿರ್ಬಂಧ

Photography & Media Restrictions

ಪ್ರೆಸ್, ಮೀಡಿಯಾ ಹಾಗೂ ಯೂಟ್ಯೂಬ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ ಮುಂತಾದವರಿಗೆ ಪ್ರವೇಶವಿಲ್ಲ. ಗ್ರಾಮಸ್ಥರು ಅಥವಾ ಭಕ್ತರು ಅಮ್ಮನವರ ಹೆಸರಿನಲ್ಲಿ ಅಥವಾ ಗ್ರಾಮದ ಹೆಸರಿನಲ್ಲಿ ಯಾವುದೇ ಜಾಲತಾಣ ರಚಿಸಿ, ಫೋಟೋ-ವಿಡಿಯೋ ಹಾಕಬಾರದು. ದೇವಾಲಯದ ಒಳಗೆ ಸೆಲ್ಫಿ/ಫೋಟೋ ತೆಗೆದರೆ ಮೊಬೈಲ್ ವಶಪಡಿಸಿಕೊಳ್ಳಲಾಗುವುದು.

English: No press, media, or unofficial social media inside the kshetra. Do not create unofficial pages in Amman's or the village's name. Selfies/photos inside the temple may result in mobile confiscation.

7

ಉಡುಗೆ ಮತ್ತು ಪ್ರವೇಶ ನಿಯಮ

Dress Code & Entry Rules

ಕಡ್ಡಾಯವಾಗಿ ಸಾಂಪ್ರದಾಯಿಕ ಉಡುಪು ಧರಿಸಿ ಬಂದವರಿಗೆ ಮಾತ್ರ ದೇವಾಲಯದ ಒಳಗೆ ಪ್ರವೇಶ. ಗರ್ಭಿಣಿ ಸ್ತ್ರೀಯರು, 2 ವರ್ಷದೊಳಗಿನ ಮಕ್ಕಳೊಂದಿಗೆ ಬಂದ ತಾಯಂದಿರು, ವಿಕಲಚೇತನರು ಹಾಗೂ ವಯೋವೃದ್ಧರಿಗೆ ನೇರ ದರ್ಶನದ ವ್ಯವಸ್ಥೆ ಇದೆ. ಎಲ್ಲಾ ಭಕ್ತರು ಸರತಿ ಸಾಲಿನಲ್ಲಿಯೇ ಬರಬೇಕು.

English: Traditional dress mandatory for temple entry. Special direct-darshan arrangements for pregnant women, mothers with children under 2, disabled devotees, and elders. All devotees must join the queue — no VIP access.

8

ಸಾಂಸ್ಕೃತಿಕ ಕಾರ್ಯಕ್ರಮ

Cultural Programmes

ಆಧುನಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಮೊದಲೇ ಬುಕ್ಕಿಂಗ್ ಕಡ್ಡಾಯ. ಗುಡಿಯ ಒಳಗೆ ಅನುಮತಿ ಇಲ್ಲ, ಇದಕ್ಕಾಗಿ ಪ್ರತ್ಯೇಕ ಸ್ಥಳ ನಿಗದಿಪಡಿಸಲಾಗಿದೆ. ವಿವರಗಳಿಗೆ ಸಮಿತಿಯನ್ನು ಸಂಪರ್ಕಿಸಿ.

English: Advance booking required for cultural programmes. Not permitted inside the temple — a separate venue is designated. Contact the Samithi for details.

9

ಇತರೆ ಸೂಚನೆಗಳು

Other Guidelines

ದೇವಾಲಯದ ಪಾವಿತ್ರ್ಯತೆ ಮತ್ತು ಸ್ವಚ್ಛತೆಯನ್ನು ಕಾಪಾಡಿ. ನಿಮ್ಮ ವೈಯಕ್ತಿಕ ವಸ್ತುಗಳಿಗೆ ನೀವೇ ಜವಾಬ್ದಾರರು.

English: Help maintain the temple's sanctity and cleanliness. You are responsible for your personal belongings.

Important

ಶ್ರೀ ಗೌರಿ ದೇವಿಯ ಜಾತ್ರಾ ಮಹೋತ್ಸವ ಮತ್ತು ಅನ್ನದಾನವು ಯಾವುದೇ ಏಕವ್ಯಕ್ತಿಯಿಂದ ನಡೆಯುವುದಿಲ್ಲ. ಇದು ಗುಮ್ಮಳ್ಳಾಪುರ ಗ್ರಾಮಸ್ಥರಿಂದ ಪರಂಪರಾಗತವಾಗಿ ನಡೆದು ಬಂದಿರುವ ಸಾಂಪ್ರದಾಯಿಕ ಪದ್ಧತಿಯಾಗಿದೆ.

The Jathre festival and Annadana are not run by any individual — they are traditional village practices upheld by Gummalapura's community.

ಶ್ರೀ ಗೌರಮ್ಮ ದೇವಿಯ ಸಂಪೂರ್ಣ ಮಹಿಮೆ

The Complete Glory of Sri Gowramma Devi

771 ಶಿವಶರಣರ ಪುಣ್ಯ ಸಹವಾಸದೊಂದಿಗೆ ಈ ಪವಿತ್ರ ಕ್ಷೇತ್ರದಲ್ಲಿ ಈ ಕೆಳಗಿನ ಎಲ್ಲವೂ 101ರ ಸಂಖ್ಯೆಯಲ್ಲಿ ನೆಲೆಸಿವೆ:

With the sacred company of 771 Shivasharanas, the following all exist here in the number 101:

ಕುತೂಹಲಕಾರಿ ಪ್ರಶ್ನೆಗಳು

Questions for Devotees to Explore

  1. ಈ ಎಲ್ಲಾ 101 ಪವಿತ್ರ ಸ್ಥಳಗಳು ಏಕೆ ನಿರ್ಮಾಣವಾದವು? ಇಲ್ಲಿರುವ 101 ದೇವರುಗಳ ಹೆಸರೇನು?

    Why were all 101 sacred sites built? What are the names of the 101 deities?

  2. ಇವೆಲ್ಲವನ್ನೂ ಒಂದೇ ರಾತ್ರಿಯಲ್ಲಿ ಯಾರು, ಹೇಗೆ ನಿರ್ಮಿಸಿದರು?

    Who built all of these in a single night, and how?

  3. ಅಮ್ಮನವರ ತವರು ಮನೆಯಾದ ಈ ಕ್ಷೇತ್ರಕ್ಕೆ ಮೂಲವಾಗಿರುವ ಹಿರೇಮಠದ ಪಾತ್ರವೇನು?

    What is the role of Hirematha, the origin of this kshetra as Amman's parental home?

  4. ಮಕ್ಕಳ ಬಸವಣ್ಣನವರು ಎಂದರೆ ಯಾರು?

    Who are "Makkala Basavannavaru"?

  5. ಗುಮ್ಮಳಾಪುರವು ಕೈಲಾಸಕ್ಕೆ ಹೇಗೆ ಹೋಯಿತು?

    How did Gummalapura become linked to Kailasa?

  6. ಮೈಸೂರು ಸಂಸ್ಥಾನದ ಚರಿತ್ರೆಯೊಂದಿಗೆ ಶಂಕರಪ್ಪ ಬಂಕದಪ್ಪನವರಿಗಿರುವ ಸಂಬಂಧವೇನು?

    What is Shankarappa Bankadappa's connection to Mysore Samsthana history?

  7. 771 ಶಿವಶರಣರ ಮಂದಿಯಲ್ಲಿ ಶ್ರೀ ಗೌರಮ್ಮನ ವಂಶಸ್ಥರು ಈಗ ಎಲ್ಲಿದ್ದಾರೆ?

    Where are Sri Gowramma's lineage among the 771 Shivasharanas today?

  8. ಅಮ್ಮನವರ ಹೆಸರಿನಲ್ಲಿ ನಾಲ್ಕು ದಿನಗಳ ಕಾಲ ನಡೆಯುವ ಜಾತ್ರೆ ಯಾವ ದೇವತೆಗಳ ಹೆಸರಿನಲ್ಲಿ ನಡೆಯುತ್ತದೆ?

    Which deities' names mark the four-day Jathre during Amman's visit?

  9. ಅಮ್ಮನವರು ತವರು ಮನೆಗೆ ಬರಲು ಕೆರೆಯಲ್ಲಿ ಏನು ದೊರೆತರೆ ಬರುತ್ತಾರೆ?

    What must appear in the lake for Amman to come to her parental home?

  10. ಗುಮ್ಮಳಾಪುರದ ನಾಲ್ಕು ದಿಕ್ಕಿನಲ್ಲಿರುವ ಶಿಲಾ ಶಾಸನದ ಮೇಲೆ ಬರೆದ ವಾಕ್ಯದ ಅರ್ಥವೇನು?

    What is the meaning of the inscription on the four-direction stone slabs?

ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಹಾಗೂ ಅಮ್ಮನವರ ಸಂಪೂರ್ಣ ಮಾಹಿತಿಯನ್ನು ಶ್ರೀ ಕ್ಷೇತ್ರ ಗುಮ್ಮಳ್ಳಾಪುರ ದೇವಾಲಯದ ಅಧಿಕೃತ ವೆಬ್‌ಸೈಟ್‌ನಲ್ಲಿ ನೋಡಿ ತಿಳಿದುಕೊಳ್ಳಬಹುದು.

Answers and complete information about Amman are being shared through this official website and the Seva Samithi.